ಮಂಜೇಶ್ವರ ಉದ್ಯಾವರದಲ್ಲಿ ನೆರೆ ನೀರು ನುಗ್ಗಿದ ಮನೆಗಳಿಗೆ SDPI ನೇತಾರರ ಭೇಟಿ

0
0

ಮಂಜೇಶ್ವರ: (www.k-onenews.in) ಅತಿವೃಷ್ಠಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆರೆ ನೀರು ನುಗ್ಗಿದ ಮಂಜೇಶ್ವರ ಪಂಚಾಯತಿನ 20- ನೇ ವಾರ್ಡಿನ ಮೊದಲ ರೈಲ್ವೇ ಸಿಗ್ನಲ್ ಸಮೀಪದ ಮನೆಗಳು ಮತ್ತು ಪರಿಸರ ಪ್ರಧೇಶಗಳನ್ನು SDPI ನೇತಾರರು ಸಂಧರ್ಶಿಸಿದರು.


ನೆರೆ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಸಂಕಷ್ಟಪಡುತ್ತಿರುವ ಈ ಪ್ರಧೇಶದಲ್ಲಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಇನ್ನಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಅದಿಕಾರಿಗಳು ಗಮನಹರಿಸಬೇಕೆಂದು ನೇತಾರರು ಅಗ್ರಹಿಸಿದ್ದಾರೆ.
ಮುಂದಿನ ಕ್ರಮಗಳಿಗಾಗಿ ಪಾಲಕ್ಕಾಡ್ ಸದರ್ನ್ ರೈಲ್ವೇ ಡಿವಿಷನಿಗೆ ಅಹವಾಲು ಸಲ್ಲಿಸಲೂ, ಇತರ ಪರಿಹಾರ ಕ್ರಮಗಳ ಅನುಷ್ಠಾನಕ್ಕಾಗಿಯೂ ಪಕ್ಷದ ಬೆಂಬಲವು ಸದಾ ಇರುವುದೆಂದೂ ತಿಳಿಸಿದರು.
SDPI ಮಂಜೇಶ್ವರ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಬಡಾಜೆ, ಲತೀಫ್ ಕರೋಡ, ಸಂಶು ಉದ್ಯಾವರ, ರಹ್ಮಾನ್ ಉದ್ಯಾವರ, ಸಿದ್ದೀಖ್ ಉದ್ಯಾವರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here